ರೂರಲ್ ಕನೆಕ್ಟ್ ಗ್ರಾಮೀಣ ಭಾಗದ ಜನರಿಗೆ ಸರಿಯಾದ, ಉಪಯುಕ್ತ ಮತ್ತು ದೃಢೀಕರಿಸಿದ ಸ್ಥಳೀಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸುಲಭವಾಗಿ ಒದಗಿಸುವ ಡಿಜಿಟಲ್ ವೇದಿಕೆ. ಕೃಷಿ, ವ್ಯಾಪಾರ, ವಿವಿಧ ಸೇವೆಗಳು, ಸ್ಥಳೀಯ ಕಾರ್ಯಕ್ರಮಗಳು ಹಾಗೂ ಮನೆಯಲ್ಲಿ ತಯಾರಿಸುವ ಉತ್ಪನ್ನಗಳ ಮಾಹಿತಿಯನ್ನು ನೇರವಾಗಿ ಸೇವಾದಾರರು ಮತ್ತು ಮಾರಾಟಗಾರರಿಂದ ಸಂಗ್ರಹಿಸಿ, ಹೆಸರು, ಸಂಪರ್ಕ ಸಂಖ್ಯೆ, ಸೇವೆ ಮತ್ತು ಸ್ಥಳದ ವಿವರಗಳೊಂದಿಗೆ ನೀಡಲಾಗುತ್ತದೆ.

ರೂರಲ್ ಕನೆಕ್ಟ್ ವೇದಿಕೆಯು, ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಮತ್ತು ಸೇವೆಗಳು ಮತ್ತು ಉತ್ಪನ್ನಗಳನ್ನು ಪಟ್ಟಿ ಮಾಡಲು ಅನುಮತಿಸುತ್ತದೆ.
ಇಲ್ಲಿ,

  • ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಸ್ವಇಚ್ಛೆಯಿಂದ ತಮ್ಮ ಮಾಹಿತಿಯನ್ನು ಸೇರಿಸುತ್ತಾರೆ.
  • ಮಾಹಿತಿಯ ನಿಖರತೆಯನ್ನು ಪರಿಶೀಲಿಸಲಾಗುತ್ತದೆ.
  • ರೂರಲ್ ಕನೆಕ್ಟ್ ಯಾವುದೇ ಹಣದ ವಹಿವಾಟುಗಳಲ್ಲಿ ಭಾಗಿಯಾಗಿರುವುದಿಲ್ಲ​.